ಬೆಂಗಳೂರು, ಕರ್ನಾಟಕದಲ್ಲಿ ಸ್ಥಾಪಿತವಾದ ಬೆಂಗಳೂರು ಎಫ್ ಸಿ ([ˈbeŋɡəɭuːɾu] ( )) ಭಾರತದ ಒಂದು ವೃತ್ತಿಪರ ಫುಟ್ಬಾಲ್ ಕ್ಲಬ್. ಈ ಕ್ಲಬ್ ಭಾರತದ ಸುಪರ್ ಲೀಗಿನಲ್ಲಿ ಸ್ಪರ್ಧಿಸುತ್ತದೆ. ೨೦ ಜುಲೈ ೨೦೧೩‌ ರಲ್ಲಿ ಈ ಕ್ಲಬ್ ಸ್ಥಾಪಿಸಲಾಯಿತು ಹಾಗೂ ಅದೇ ವರ್ಷ ೨೨ ದಿನಾಂಕ, ಸೆಪ್ಟೆಂಬರ್ ತಿಂಗಳಲ್ಲಿ, ಅದರ ಮೊದಲನೇ ಸ್ಪರ್ಧಾತ್ಮಕ ಸೀಸನ್ ಐ-ಲೀಗಿನಲ್ಲಿ ಪ್ರಾರಂಭವಾಯಿತು. ಅದರ ರಚನೆಯಿಂದ ಇವತ್ತಿಗೂ ಎರಡು ಐ-ಲೀಗ್ ಪ್ರಶಸ್ತಿಗಳು ಗೆದ್ದಿದೆ. ಹಾಗೂ, ಎರಡು ಫೆಡರೆಷನ್ ಕಪ್, ಒಂದು ಭಾರತದ ಸುಪರ್ ಲೀಗ್‌ ಮತ್ತು ಒಂದು ಸುಪರ್ ಕಪ್ ಗೆದ್ದಿದೆ. ೨೦೧೮–೧೯ ಭಾರತದ ಸುಪರ್ ಲೀಗಿನಲ್ಲಿ ಅವ್ರು, ಎಫ್ ಸಿ ಗೊವಾವನ್ನು ಫೈನಲ್ ಪಂದ್ಯದಲ್ಲಿ ಸೋಲಿಸಿ ಮೊದಲನೇಯ ಐ ಎಸ್ ಎಲ್ ಪ್ರಶಸ್ತಿ ಗಳಿಸಿದರು. ಈ ಪಂದ್ಯದ ಪೂರ್ಣ ಸಮಯ ನಂತರ, ಬೆಂಗಳೂರು ೧–೦ ಸ್ಕೊರಿಂದ ಜಯ ಸಾಧಿಸಿದರು. ಈ ಕ್ಲಬ್ಬಿನ ಕಾರ್ಯ, ಮುಂಬೈಯಲ್ಲಿ ಸ್ಥಾಪಿಸಿದ ಜಿ ಎಸ್ ಡಬ್ಲ್ಯು ಕಂಪನಿ ಮತ್ತು ಅದರ ವ್ಯವಸ್ಥಾಪಕ ನಿರ್ದೇಶಕ ಸಜ್ಜನ್ ಜಿಂದಾಲ್ ನಿರ್ವಹಿಸುತ್ತಾರೆ. ೨೦೧೪–೧೫ ಸಿಸನಿಂದ ಬೆಂಗಳೂರು ಎಫ್ ಸಿ ತಮ್ಮ ಮ‌ನೆಯ ಪಂದ್ಯಗಳು ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ಆಡುತ್ತಿದ್ದಾರೆ. ಕೆವಲ ನಾಲ್ಕು ಸಿಸನ್ ಐ–ಲಿಗಿನಲ್ಲಿ ಆಡಿದ ನಂತರ, ಬೆಂಗಳೂರು ಎಫ್ ಸಿ ಒಂದು ಮಾದರಿಯಾಗಿದೆ ಕ್ಲಬ್ ಅಂತ ಭಾರತ ದೇಶದಲ್ಲಿ ಪರಿಗಣಿಸಲಾಗಿದೆ. ತಂಡದ ಆಟಗಾರರಿಗೆ ಅಧೋನಿಕಾ ಫಿಟ್ನೆಸ್ ಉಪಕರಣಗಳ ಮೂಲಕ ಅಭಿವೃದ್ಧಿಪಡಿಸಿ ಬೆಂಗಳೂರು ಎಫ್ ಸಿ ಭಾರತದ ಕಾಲು ಚೆಂಡು ಆಟದ ದೃಶ್ಯದಲ್ಲಿ ಪ್ರಶಂಸೆ ಗಳಿಸಿದರು. ವೃತ್ತಿಪರತೆ ಜೊತೆಗೆ ಬೆಂಗಳೂರು ಎಫ್ ಸಿ ತಮ್ಮ ಅಭಿಮಾನಿಗಳ ಕ್ಲಬ್ 'ವೆಸ್ಟ್ ಬ್ಲಾಕ್ ಬ್ಲೂಸ್' ಕಾರಣಕ್ಕೆ ಪ್ರಸಿದ್ಧವಾಗಿದೆ. ಈ ಅಭಿಮಾನಿಗಳ ಕ್ಲಬ್ ಭಾರತದ ಅತ್ಯಂತ ಸ್ವರ ಮತ್ತು ಭಾವೋದ್ರಿಕ್ತ ಅಭಿಮಾನಿ ಬಳಗಗಳಲ್ಲಿ ಒಂದಾಗಿದೆ. ೨೨ ಸೆಪ್ಟೆಂಬರ್ ೨೦೧೩, ಐ-ಲೀಗಿನಲ್ಲಿ, ಬೆಂಗಳೂರು ಎಫ್‌ಸಿ ತನ್ನ ಉದ್ಘಾಟನಾ ಪಂದ್ಯವನ್ನು ಆಡಿತು, ಈ ಪಂದ್ಯ ಮೋಹನ್ ಬಗಾನ್ ವಿರುದ್ಧ ೧–೧ ರ ಸಮಬಲದಲ್ಲಿ ಕೊನೆಗೊಂಡಿತು. ಅವ್ರು ತನ್ನ ಚೊಚ್ಚಲ ಸೀಸನಲ್ಲಿ ಐ-ಲೀಗ್ ಅನ್ನು ಗೆದ್ದುಕೊಂಡಿತು ಮತ್ತು ಮತ್ತೆ ಎರಡು ಸೀಸನಗಳ ನಂತರ ೨೦೧೪-೧೫ ರಲ್ಲಿ ಮತೊಮ್ಮೆ ವಿಜಯಶಾಲಿಯಾದರೂ. ಎರಡು ಲೀಗ್ ಪ್ರಶಸ್ತಿಗಳ ಜೊತೆಗೆ, ಬೆಂಗಳೂರು ೨೦೧೫ ಮತ್ತು ೨೦೧೭ ರಲ್ಲಿ ಎರಡು ಫೆಡರೇಶನ್ ಕಪ್‌ಗಳನ್ನು ಸಹ ಗೆದ್ದಿದೆ. ೨೦೧೫ ಮತ್ತು ೨೦೧೮ ರ ನಡುವೆ ಕ್ಲಬ್ ಏಷ್ಯನ್ ಕ್ಲಬ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿತು, ಸತತ ನಾಲ್ಕು ವರ್ಷಗಳ ಕಾಲ ಎಎಫ್‌ಸಿ ಕಪ್‌ನಲ್ಲಿ ಸ್ಪರ್ಧಿಸಿತು. ೨೦೧೬ ರ ಎಎಫ್‌ಸಿ ಕಪ್‌ನಲ್ಲಿ ಬೆಂಗಳೂರು ಫೈನಲ್‌ಗೆ ತಲುಪಿ 1–0ರಿಂದ ಇರಾಕ್‌ನ ಅಲ್-ಕ್ವಾ ಅಲ್-ಜಾವಿಯಾ ವಿರುದ್ಧ ಸೋತರು. ೨೮ ಸೆಪ್ಟೆಂಬರ್ ೨೦೧೯ ರಂದು, ಕ್ಲಬ್ ಸ್ಕಾಟಿಷ್ ಪ್ರೀಮಿಯರ್ ಲೀಗ್ ಕ್ಲಬ್ ರೇಂಜರ್ಸ್ ಎಫ್‌ಸಿಯೊಂದಿಗೆ ಪಾಲುದಾರಿಕೆಯನ್ನು ಮಾಡಿಕೊಂಡಿದೆ ಎಂದು ಘೋಷಿಸಲಾಯಿತು. == ಬಿರುದುಗಳು == === ಭೂಖಂಡ ಸ್ಪರ್ಧೆ === ಎ ಎಫ್ ಸಿ ಕಪ್ಪು ರನ್ನರ್ಸ್ಅಪ್ (೧): ೨೦೧೬ === ಗೃಹಬಳಕೆಯ === ==== ಲೀಗುಗಳು ==== ಭಾರತದ‌ ಸುಪರ್ ಲೀಗ್ ವಿಜೇತರು (೧): ೨೦೧೮-೧೯ ರನ್ನರ್ಸ್ಅಪ್ (೧): ೨೦೧೭-೧೮ ಐ-ಲೀಗ್ ವಿಜೇತರು (೨): ೨೦೧೩-೧೪, ೨೦೧೫-೧೬ ರನ್ನರ್ಸ್ ಅಪ್ (೧): ೨೦೧೪-೧೫ ==== ಕಪ್ ಗಳು ==== ಫೆಡರೆಷನ್ ಕಪ್ ವಿಜೇತರು (೨): ೨೦೧೪-೧೫, ೨೦೧೬-೧೭ ಭಾರತದ ಸುಪರ್ ಕಪ್ ವಿಜೇತರು (೧): ೨೦೧೮ == ಉಲ್ಲೇಖಗಳು ==